ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ. ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆಯ ನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ. == ವಿಭಾಗಗಳು == ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ. ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ. === ಪ್ರಮುಖ ಭಾಷೆಗಳು === ಕನಿಷ್ಟ ೪ ಮಿಲಿಯನ್ ಮಾತುಗಾರರಿರುವ ಭಾಷೆಗಳು ಜಾವಾದ ಭಾಷೆ (76 ) ಮಲೈ ಭಾಷೆ (ಇಂಡೊನೇಷ್ಯಾದ ಮಲೈ ಮತ್ತು ಮಲೇಶಿಯದ ಮಲೈ ಸೇರಿ)(40 , 175 ) ಸುಂದದ ಭಾಷೆ (27 ) ಟಾಗಲಾಗ್ (22 , ~85 ) ಸೆಬುಆನೊ ಭಾಷೆ (19 , ~30 ) ಮಲಗಸಿ (17 ) ಮದುರ ಭಾಷೆ (14 ) ಇಲೊಕಾನೊ (8 , ~10 ) ಹಿಲಿಗೇನೊನ್ (7 , ~11 ) ಮಿನನ್ಗ್‍ಕಬಾಉ (7 ) ಇಂಡೊನೇಷ್ಯಾದ ಬತಕ್ (6 , ) ಬಿಕೊಲ್ (4.6 , ) ಬಂಜರ್ (4.5 ) ಬಾಲಿಯ ಭಾಷೆ (4 ) ಅಧಿಕೃತ ಭಾಷೆಗಳು ಇಂಡೊನೇಷ್ಯಾದ ಮಲೈ (23 , ~220 , ಇಂಡೊನೇಷ್ಯಾ) ಟಾಗಲಾಗ್ (22 , ~85 , ಫಿಲಿಪ್ಪೀನ್ಸ್) ಮಲೇಶಿಯಾದ ಮಲೈ (18 , ಮಲೇಶಿಯ, ಸಿಂಗಾಪುರ್, ಮತ್ತು ಬ್ರುನೈ) ಮಲಗಸಿ (17 , ಮಡಗಾಸ್ಕರ್) ಟೆಟುಮ್ ಭಾಷೆ (800,000 , ಪೂರ್ವ ಟೀಮೋರ್) ಫಿಜಿಯ ಭಾಷೆ (350,000 , 550,000 , ಫಿಜಿ) ಸಮೋಅದ ಭಾಷೆ (370,000, ಸಮೋಅ) ತಹಿತಿಯ ಭಾಷೆ (120,000, ಫ್ರೆಂಚ್ ಪಾಲಿನೇಸ್ಯ) ಟೋಂಗದ ಭಾಷೆ (108,000, ಟೋಂಗ) ಗಿಲ್ಬರ್ಟೀಸ್ (100,000, ಕಿರಿಬಾತಿ) ಮಾಓರಿ ಭಾಷೆ (100,000, ನ್ಯೂ ಜೀಲ್ಯಾಂಡ್) ಚಮೊರ್ರೊ ಭಾಷೆ (60,000, ಗ್ವಾಮ್ ಮತ್ತು ಉತ್ತರ ಮರಿಯಾನ ದ್ವೀಪಗಳು) ಮಾರ್ಶಲ್ಲೀಸ್ ಭಾಷೆ (> 44,000, ಮಾರ್ಶಲ್ ದ್ವೀಪಗಳು) ನಾಉರು ಭಾಷೆ (6,000, ನಾಉರು) ಹವಾಯಿ ಭಾಷೆ (1000 , 8000 , ಹವಾಯಿ)